Friday, 31 January 2014

ನಿಲ್ಲುವುದೇ ಮೌಢ್ಯ ಸಿದ್ದರಾಮ.!

ಬಗೆಯುತ್ತಿದ್ದಾರೆ ಭೂತಾಯಿ ಒಡಲ ಚಿನ್ನಕ್ಕಾಗಿ
ತಲೆಕೆಟ್ಟ ಸಾಧುಗಳ ಕನಸ ಕೇಳಿ...
                                     


                  
ಉಡಾಯಿಸುತ್ತಲೇ ಇದ್ದಾರೆ ಸ್ಯಾಟಲೈಟ್, ರಾಕೇಟುಗಳ
ತಿರುಪತಿ ತಿಮ್ಮಪ್ಪನೆಂಬ ಕಲ್ಲಿನ ಮೊರೆ ಹೋಗಿ
ಎಲ್ಲಿದೆ ತರ್ಕ, ಇನ್ನೆಲ್ಲಿ ಉಳಿದಿದೆ ವಿಜ್ಞಾನ
ತುಂಬಿ ತುಳುಕುತ್ತಿದೆ ಅಜ್ಞಾನ
ಎಡೆಯೆತ್ತಿದೆ ಮೌಢ್ಯ ಅಂಧಾಭಿಮಾನ





ಜಗತ್ತಿಗೆ ಮೌಢ್ಯನಿಬೀಡ ಶಾಂತಿ ಸಾರಿದ
ಬುದ್ದ, ಬಸವರಿಗೂ ಬಾಂಬುಗಳನ್ನಿಟ್ಟು
ಹೋಮ ಮಾಡಿವೆ ಸಂಘಪರಿವಾರಗಳು

ಮನೆ, ಮಠ, ಕಚೇರಿ ಪ್ರವೇಶಕ್ಕೂ
ಹೋಮ ಹವನ ನಡೆಸಿವೆ ಅಂಧ ಆಡಳಿತ ವರ್ಗ

ಬುದ್ದ ಬಸವಾದಿ ಶರಣರ ತತ್ವಗಳನ್ನೇ
ಬುಡಮೇಲು ಮಾಡಿರುವ ಇಂತಹ ಅನಾಗರಿಕ
ಮನುವಾದಿಗಳ ಮುಂದೆ ನಿಲ್ಲುವುದೇ
ನಿಮ್ಮ ಮೌಢ್ಯ ನಿಷೇಧ ಕಾಯ್ದೆ ಸಿದ್ದರಾಮ.

ಪ್ರಕಾಶ್.. 

Thursday, 30 January 2014

ಸಿಕ್ಕಿಕೊಂಡಿದ್ದೇನೆ


ಸಿಕ್ಕಿಕೊಂಡಿದ್ದೇನೆ ನಾ
ಕೊಳಕು ತುಂಬಿರುವ ಸಾಗರದಲ್ಲಿ.

 
ನಾನೊಬ್ಬ ನಿಪುಣ ಈಜುಗಾರನೂ ಹೌದು.
ಸುಳಿಗಳನ್ನು ಭೇಧಿಸಿ ಹೊರಬರುವ ಶಕ್ತಿಯೂ ನನಗಿದೆ.
ಆದರೆ ಈಜಿ ಬರವ ಕನಿಷ್ಟ ಪ್ರಯತ್ನವನ್ನು ಮಾಡುತ್ತಿಲ್ಲವೇಕೆ.?

ಇಲ್ಲ ನಾನು ಇದರಿಂದ ಹೊರಬರುವ ಕನಸನ್ನೂ ಕಾಣುವುದಿಲ್ಲ. 
ಏಕೆಂದರೆ. ಇಲ್ಲೇ ಇರುವುದು ನನ್ನ ಬೇರು,  ಬೇರಿಲ್ಲದೆ ಗಿಡಮರ ಬದುಕುವುದುಂಟೆ!



ಚಿತ್ರ ಕೃಪೆ:georgetzouvaras.com

ಹಿಂದೆಯೂ ಸಾಗರ ಮಲೀನಗೊಂಡಿದೆ

ನೂರಾರು ಮಾನವತಾವಾದಿಗಳ ತತ್ವಗಳಿಂದ
ಮಲೀನಗೊಂಡಿದ್ದ ಸಾಗರ ತಿಳಿಯೂ ಆಗಿದೆ.

ಕನಿಷ್ಟ ಪ್ರಯತ್ನವನ್ನಾದರೂ ಮಾಡುತ್ತೇನೆ

ಮಲೀನಗೊಂಡಿರುವ ಸಾಗರವನ್ನು ಶುದ್ಧಗೊಳಿಸಲು.

ಪ್ರಕಾಶ್‍.